Abstract
ಕೃಷಿಕರಲ್ಲಿ ಶಿಕ್ಷಣ ಕಲಿತ ಮತ್ತು ಕಲಿಯದೆ ಇರುವವರ ನಡುವಿನ ಸಾಮರಸ್ಯ: “ಮುಟ್ಟು” ಕತೆಯಲ್ಲಿ ಕೃಷಿ ಕುಟುಂಬದ ಬದುಕು ಮತ್ತು ಕೃಷಿ ಕುಟುಂಬದಿAದ ಶಿಕ್ಷಣ ಪಡೆದು ದುಡಿಯಲು ಬೆಂಗಳೂರು ಸಿಟಿಗೆ ಹೋದವರ ನಡುವಿನ ಸಾಮರಸ್ಯದ ತೊಡಕುಗಳು, ಹಳ್ಳಿ ಮತ್ತು ನಗರವಾಸಿಗಳ ಅನುಭವದ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಈ ಕತೆಯ ನಾಯಕಿ “ನಿಮ್ಮಿ” “ಯಾವ್ದಾದ್ರು ಜಮೀನ್ದಾರನ್ನ ಮದುವೆಯಾಗಿ ತೋಟಗಾರಿಕೆ ಅಂತ ಹಾಯಾಗಿರಬಹುದಿತ್ತು ಅಂತ ಸಾವಿರಸಲ ಅನಿಸಿದೆ. ಬರಿ ಅನಿಸುವುದಷ್ಟೇ, ಆದರೆ ಬೆಂಗಳೂರು ಎಂಬ ಮಾಯಾ ನಗರಿಯ ವ್ಯಾಮೋಹ ಯಾರನ್ನು ಬಿಡುತ್ತದೆ. ಇಲ್ಲೇನೋ ಕಡಿದು ಕಟ್ಟೆ ಹಾಕಿ ಉದ್ಧಾರ ಮಾಡುವುದಿದೆ, ಎಂಬ ಹುಚ್ಚು ಹಂಬಲ. ಸಾಧಿಸುತ್ತಿರುವುದು ಏನೂ ಅಲ್ಲ ಎರಡು ಹೊತ್ತಿನ ಊಟ ಬಟ್ಟೆ ಅವಶ್ಯಕತೆಗಳನ್ನಷ್ಟೇ.
Published Version
Talk to us
Join us for a 30 min session where you can share your feedback and ask us any queries you have